ಬುಧವಾರ, ಏಪ್ರಿಲ್ 30, 2008

ನಿನ್ನಿಂದಲೇ ನಿನ್ನಿಂದಲೇ -

ಹೇಹೇಹೆ ಆಹಾಹಾ ತನನಾನ ನನನಾನ ನನನಾನನಾ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಹೇಹೇಹೇ ಆಹಾಹಾ ತನನಾನ ನನನಾನ ನನನಾನನಾ

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಮಂಗಳವಾರ, ಏಪ್ರಿಲ್ 15, 2008

ಇವನು ಗೆಳೆಯನಲ್ಲ -

ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲು ನಗುತಿಹನಲ್ಲ
ಯಾಕೆ ಈ ಥರ
ಜಾಣ ಮನವೆ ಕೇಳು
ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ
ಇರಲಿ ಅಂತರ
ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ

ಒಲವ ಹಾದಿಯಲ್ಲಿ
ಇವನು ನನಗೆ ಹೂವೋ ಮುಳ್ಳೋ
ಮನದ ಕಡಲಿನಲ್ಲಿ
ಇವನು ಅಲೆಯೋ ಭೀಕರ ಸುಳಿಯೋ
ಅರಿಯದಂಥ ಹೊಸ ಕಂಪನವೋ
ಏನೋ ಕಾಣೆನು
ಅರಿತೊ ಮರೆತೊ ಜೀವ
ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯಿ ಮನವೇ
ಉಳಿಸು ನನ್ನನು
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು
ತನ್ನ ತಾನೆ ಸುಡುತಿಹನಿಲ್ಲ
ಒಲುಮೆಯೆಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ
ಏನು ಕಳವಳ
ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ
ಜಾರಿಬಿದುವುದೇ ಈ ಹೃದಯ
ಏನೋ ತಳಮಳ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ

ಕುಣಿದು ಕುಣಿದು ಬಾರೆ -

ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವಾ ನಿನ್ನ ಮೇಲೆ
ಮಳೆಯಾ ಹನಿಯ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ
ಒಲವೇ ವಿಸ್ಮಯ
ನಿನ್ನ ಪ್ರೇಮ, ರೂಪ ಕಂಡು
ನಾನು ತನ್ಮಯ

ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೋ
ಒಲವೆ ವಿಸ್ಮಯ

ಇರುಳಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ

ನಿನ್ನ ಕಣ್ಣ ತುಂಬ
ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೇ
ಪರಿಮಳದಲ್ಲಿ ಅರಳುವ ಬಾರೋ
ಒಲವೆ ವಿಸ್ಮಯ

ಒಲವೆ ನೀನೊಲಿದಾ ಕ್ಷಣದಿಂದಲೇ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ ಹೂವಾಗಿರೆ
ಬೇರೇನೂ ಬೇಕಿಲ್ಲ ನೀನಲ್ಲದೆ

ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ
ಒಲವೇ ವಿಸ್ಮಯ
ನಿನ್ನ ಪ್ರೇಮ, ರೂಪ ಕಂಡು
ನಾನು ತನ್ಮಯ

ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೋ
ಒಲವೆ ವಿಸ್ಮಯ

ಶನಿವಾರ, ಏಪ್ರಿಲ್ 12, 2008

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ -

ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ!
ನಿನ್ನ ಮುಗಿಲ ಸಾಲೇ... ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿ ಮಳೆಗೆ... ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ... ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿ ಒಡೆಯುವುದೋ... ತಿಳಿಯದಾಗಿದೆ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಭುವಿ ಕೆನ್ನೆ ತುಂಬಾ... ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ... ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು... ಪ್ರೇಮನಾದವೋ
ಎಳೆ ಮುಗಿಲಿನಲ್ಲಿ... ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು... ಏನು ಮೋಡಿಯೋ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಯಾವ ಹನಿಗಳಿಂದಾ... ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದಾ... ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ... ಯಾರು ಬರೆದರೋ
ಯಾವ ಪ್ರೀತಿ ಹೂವು... ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ... ಯಾರು ಬಲ್ಲರೋ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಒಲವ ಚೆಂದಮಾಮ... ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ... ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ... ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವಾ ಇಂದು...
ಧನ್ಯನಾದೆ ಪಡೆದುಕೊಂಡು... ಹೊಸ ಜನ್ಮವೋ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಅರಳುತಿರು ಜೀವದ ಗೆಳೆಯ -

ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ ಪ್ರೇಮದಾ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ... ಹೀಗೇ ಸುಮ್ಮನೆ
ಅರಳುತಿರು ಜೀವದ ಗೆಳೆಯ...

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು... ಯಾಕೇ ಸುಮ್ಮನೆ
ಅರಳುತಿರು ಜೀವದ ಗೆಳೆಯ...

ಮಾತಿಗೆ ಮೀರಿದ ಭಾವದ ಸೆಳೆತವೆ ಸುಂದರ
ನಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆ ಆದರು ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ... ಹೀಗೇ ಸುಮ್ಮನೆ...

ಅರಳುತಿರು ಜೀವದ ಗೆಳೆಯ...
ಸ್ನೇಹದ ಸಿಂಚನದಲ್ಲಿ...
ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ... ಹೀಗೇ ಸುಮ್ಮನೆ
ಅರಳುತಿರು ಜೀವದ ಗೆಳೆಯ...

ಶುಕ್ರವಾರ, ಏಪ್ರಿಲ್ 11, 2008

ಅನಿಸುತಿದೆ ಯಾಕೋ ಇಂದು -

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ! ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ... ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇಂದು...

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ನು ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೇ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ... ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇಂದು...

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸೊಲ್ಲಿದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೇ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ... ಹಾಗೇ ಸುಮ್ಮನೆ

ಅನಿಸುತಿದೆ ಯಾಕೋ ಇಂದು...
ನೀನೇನೆ ನನ್ನವಳೆಂದು...
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ! ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ... ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇಂದು...