ಭಾನುವಾರ, ಆಗಸ್ಟ್ 3, 2008

ನನ್ನ ಚೆಲುವೆ -

ನನ್ನ ಚೆಲುವೆ, ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ, ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬ ತುಂಬಿಕೊಳಲೇ
ಹಾಗೇನೇ ಮೇಲೆ ಒಮ್ಮೆ ಹರಿದು ಬರಲೇ

ಲಾಲ ಲಲಲಾ

ನನ್ನ ಚೆಲುವೆ, ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ, ಮುದ್ದು ಚೆಲುವೆ...

ಆ ಸೂರ್ಯನಿಗೆ ನೀ ಕಾಣದಿರು
ಈ ಅಂದವನು ಬೇಡುವನು
ಮುಸ್ಸಂಜೆಯಲಿ ನೀ ಸುಳಿಯದಿರು
ನಿನ್ನ ಕದ್ದು ಕೊಂಡೊಯ್ಯುವನು

ಅಗೋ ಅಗೋ ಆ ತಾರೆಯು
ಇಗೋ ಇಗೋ ತಂಗಾಳಿಯು
ಸುಳಿದು ಸುಳಿದು ನಿನ್ನ ಬಯಸಿದೆ
ನಿನ್ನ ಹೂವೊಡಲ ರಮಿಸಿದೆ
ಸರಿಯೇ ಹೇಳು

ಲಾಲ ಲಲಲಾ

ನನ್ನ ಚೆಲುವೆ, ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ, ಮುದ್ದು ಚೆಲುವೆ...

ನಿನ್ನಂದದಲಿ ನಾ ಮೈ ತೊಳೆದು
ಶೃಂಗಾರವನೆ ಸೆರೆ ಹಿಡಿವೆ
ಈ ಹೂನಗೆಯ ನಾ ಬೊಗಸೆಯಲಿ
ಪಡೆದು ನನ್ನೆದೆಗೆ ಅರ್ಪಿಸುವೆ

ನನ್ನಾ ತುಂಬಾ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರ ಉಸಿರಿನಲಿ ಚಲನವು
ಹೃದಯ ಹೃದಯಗಳ ಮಿಲನವು
ಇದುವೇ ಪ್ರೇಮ

ಲಾಲ ಲಲಲಾ

ನನ್ನ ಚೆಲುವೆ, ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ, ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬ ತುಂಬಿಕೊಳಲೇ
ಹಾಗೇನೇ ಮೇಲೆ ಒಮ್ಮೆ ಹರಿದು ಬರಲೇ

ಲಾಲ ಲಲಲಾ

ಲಲಲಲಲಾ ಲಲಲಲಲಾ
ಲಾಲಲ ಲಾಲಲ ಲಾಲಲಲಾ
ಲಲಲಲಲಾ ಲಾಲಲಲಲಾ...

ಭಾನುವಾರ, ಮೇ 18, 2008

ಆಹಾ ಒಂಥರಾ ಥರ -

ಓ ಒಓ
ನನನ ನನನ ತನ ಧನನ ಧನನ ತನ ಧನನ ಧನನ ಧನನ ಧನನ ದ..

ನಿನ್ನ ನೋಡಲೆಂತೋ
ಮಾತನಾಡಲೆಂತೋ
ಮನಸ ಕೇಳಲೆಂತೋ
ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ

ನಿನ್ನ ನೋಡಲೆಂತೋ
ಮಾತನಾಡಲೆಂತೋ
ಮನಸ ಕೇಳಲೆಂತೋ
ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ

ಹೋ ಕಣ್ಣಿಗೇನು ಕಾಣದೆ
ಸ್ಪರ್ಶವೇನು ಇಲ್ಲದೆ
ಏನು ನನ್ನ ಕಾಡಿದೆ
ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ
ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ
ಹೇಳಲೇನು ಆಗದೆ
ಮನಸು ಮಾಯವೆಂತೋ
ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ
ನಯನ ಸೇರಲೆಂತೋ
ಮಿಲನವಾಗಲೆಂತೋ
ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ

ಮೆಲ್ಲ ಮೆಲ್ಲ ಮೆಲ್ಲುವ
ಸನ್ನಿಯಲ್ಲಿ ಕೊಲ್ಲುವ
ಸದ್ದೆ ಇರದ ಉತ್ಸವ
ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ
ಹೃದಯ ಗೀಚಿ ನಾದವ
ಪ್ರೀತಿ ತಂದ ರಾಗವ
ತಾಳಲೆಂತೊ ಭಾವವ
ಹೃದಯದಲ್ಲಿ ಎಂತೋ
ಓ ಓ ಓ ಓ
ಉದಯವಾಯಿತೆಂತೋ
ಸನಿಹವಾಗಲೆಂತೋ
ಕನಸ ಕಾಣಲೆಂತೋ
ಹರುಷ ಏನೊ ಎಂತೋ
ಸೊಗಸ ಹೇಳಲೆಂತೋ
ಆಹಾ ಒಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ
ಹೇಳಲೊಂಥರಾ ಥರ
ಕೇಳಲೊಂಥರಾ ಥರ

ಮಂಗಳವಾರ, ಮೇ 6, 2008

ನೀ ಚಂದಾನೆ ನಿನ್ನಾಸೆ ಚಂದಾನೆ -

ಓ ಒಓ ಓಓ ಒಓ ಒಓ ಒಓ ಓ ಓಓ

ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ
ಚಂದ್ರಮಗೂ ನಿನ್ನಂದ ಚಂದಾನೆ
ಭೋರ್ಗರೆವ ನಿನ್ ಪ್ರೀತಿ ಚಂದಾನೆ
ನೀನಿದ್ದರೆ ಬಾಳೇ ಚಂದಾನೆ

ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ

ಕರಿಯ ನಿನ್ನ ಕಣ್ಣ ಒಳಗೆ ಜೋಗವು ಚಂದಾನೆ
ಕುಣಿದು ಕುಣಿದು ನನ್ನ ಸೆಳೆವ ರೀತಿಯು ಚಂದಾನೆ
ಹೋ... ನಾಚಿ ನಾಚಿ ನನ್ನ ಕರೆದ ಕೂಗೆಂತ ಚಂದಾನೆ
ಕಾಡಿ ಬೇಡ ನನ್ನ ಕೂಡಿದಾ ಘಳಿಗೆ ಚಂದಾನೆ
ಮುತ್ತಿನ ಮೂಗುತಿ ಕೊಟ್ಟವನೆ
ಮಂತ್ರದ ಹೂವನು ಇಟ್ಟವನೆ
ಬಡವ ನಾನು ಭಾಗ್ಯ ನೀನು
ನನಗೆ ಒಲಿದ ಸಿರಿಯು ನೀನು
ನಾನು ಪಡೆದಾ ಒಲುಮೆ ನೀನು

ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ

ನಲ್ಲೆ ನಿನ್ನ ಕೆನ್ನೆ ಮೇಲೆ ಜೇನಿಗೇನು ಕೆಲಸ
ಕದ್ದು ನಿನ್ನ ಮುದ್ದು ಮಾಡೋದ್ಯಾಕೆ ಇಂಥ ಸರಸ
ಓ... ಸದ್ದು ಯಾಕೆ ಮುದ್ದು ಬೇಕೆ ಬಾ ನನ್ನ ಅರಸ
ಒಂದೇ ಒಂದು ಸಾರಿ ನನ್ನ ಕೂಗಿದ್ರೆ ಹರುಷ
ಏನ್ ಚಂದಾನೆ ನಲ್ಲೆ ಏನ್ ಚಂದಾನೆ
ಈ ನಿನ್ನ ಮಾತಿಂದ ಆನಂದಾನೆ
ಇರಲಿ ಇರಲಿ ಹೀಗೆ ಎಂದೂ
ಜನುಮ ಜನುಮ ನಾವು ಒಂದು
ನೀನೆ ನನಗೆ ಪ್ರೇಮಸಿಂಧು

ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ
ನಾನಿಂದು ನಿನ್ನಿಂದ ಚಂದಾನೆ
ಭೋರ್ಗರೆವ ನಿನ್ ಪ್ರೀತಿ ಚಂದಾನೆ
ನೀನಿದ್ದರೆ ಬಾಳೇ ಚಂದಾನೆ

ಹಹ್ಹಹಹ

ಶನಿವಾರ, ಮೇ 3, 2008

ಅದೇ ಭೂಮಿ ಅದೇ ಬಾನು -

ಅದೇ ಭೂಮಿ ಅದೇ ಬಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ
ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು
ಈ ನಯನ ನೂತನ

ಉದಯ ಕಿರಣ ಸೆಳೆದಾಗ
ಹೂವ ಹನಿಯು ಹೊಳೆದಾಗ
ಋತುವಿನ ಬಂಧನ
ಹೃದಯ ಕಣ್ಣಲ್ಲಿ ಒಲಿವಾಗ
ಬೆರೆತು ಈ ಜೀವ ನಲಿವಾಗ
ಒಲವಿನ ಬಂಧನ

ಅದೇ ಭೂಮಿ ಅದೇ ಬಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ
ಹೋ ಏನು ಮಧುರ ಈ ಬಂಧನ

ಲಾಲಾಲಾಲಲ ಲಾಲಾಲಾ
ಲಾಲಾಲಾಲಲ ಲಾಲಾಲಾ
ಲಾಲಾಲಾಲಲ ಲಾಲಾಲಾ
ಲಾಲಾಲಾಲಲ ಲಾಲಾಲಾ

ಕನಸಿನ ನೂರು ಎಳೆಯಿಂದ
ನೇಯುವ ಗೂಡು ಸಂಬಂಧ
ನಲುಮೆಯ ಬಂಧನ
ಯಾರೋ ಕರೆದಂತೆ ದೂರಿಂದ
ಗರಿಯ ತೆರೆದಂಥ ಮರಿ ಚಂದ
ಗೆಲುವಿನ ಬಂಧನ

ಅದೇ ಭೂಮಿ ಅದೇ ಬಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ
ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು
ಈ ನಯನ ನೂತನ

ಶುಕ್ರವಾರ, ಮೇ 2, 2008

ನನಗು ನಿನಗು ಕಣ್ಣಲ್ಲೆ ಪರಿಚಯ -

ನನಗು ನಿನಗು ಕಣ್ಣಲ್ಲೆ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ
ನನಗು ನಿನಗು ಕಣ್ಣಲ್ಲೆ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ

ನಲುಮೆ ಸ್ನೇಹದಾ ನವಿರಾದ ಗ್ರಂಥವೆ
ಪುಟವ ತೆರೆಯುವ ಹಿತವಾದ ಗಂಧವೆ
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನೂ ಕಥೆಯಲೀ ನೀ ನನ್ನ ಕರೆವೆಯ
ನನಗು ನಿನಗು ಕಣ್ಣಲ್ಲೆ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ

ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮಧುರ ಭಾವಕೆ ನಂದೊಂದು ಕೋರಿಕೆ
ಎಲ್ಲ ತಿಳಿದರೂ ಯಾಕಿನ್ನೂ ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ
ನನಗು ನಿನಗು ಕಣ್ಣಲ್ಲೆ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ

ನಗು ನಗು -

Got to smile... All the while
ಈ ಜೀವನ is yours everyday
Got to smile... All the while
ಈ ಜೀವನ is yours everyday

ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು ನಗು
ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು

ನೊಂದರೆ ಬೆಂದರೆ ಚಾರ್ಲಿ ಚಾಪ್ಲಿನ್ನು
ಲೋಕವನ್ನು ನಗಿಸಲಿಲ್ಲವೆ
ರಾಜ್ ಕಪೂರ್ ಜೀವನ ಏನೆ ಆದರೂ
ಖುಷಿಯ ಹಂಚಿ ಹೋಗಲಿಲ್ಲವೆ
ಪಾತ್ರಧಾರರು ಭೂಮೀಲಿ ಎಲ್ಲರು
ಆಡಿಸೋ ಸೂತ್ರ ದೇವರು
ಏನೆ ಬಂದರು ಅದೇನೆ ಆದರು
ಎಂದಿಗು ನೀನು ನಗುತಿರು

ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಚಿಂತೆಯನ್ನು ಚಿಂದಿ ಮಾಡೊ ಚಂದದಾ ನಗು

ನಿತ್ಯವೂ ಸೂರ್ಯನು ಮುಳುಗಿ ಹೋದರೂ
ಮತ್ತೆ ಹುಟ್ಟಿ ಬಂದೆ ಬರುವನು
ಚಂದದಾ ಚಂದ್ರನು ಕರಗಿ ಹೋದರೂ
ಹುಣ್ಣಿಮೆಗೆ ತುಂಬಿ ಹೊಳೆವನು
ಏಳು ಬೀಳಿನ ಈ ನಮ್ಮ ಜೀವನ
ಮುಂದಿದೆ ನಿಂಗು ಒಂದಿನಾ
ನಕ್ಕ ಆ ಕ್ಷಣ ನಿರಾಳ ಮೈ ಮನ
ಅರಳಲಿ ಬಾಳ ಹೂವನ

ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಚಿಂತೆಯೆಲ್ಲ ಚಿಂದಿ ಮಾಡಿ ಒಮ್ಮೆ ನೀ ನಗು

ಬುಧವಾರ, ಏಪ್ರಿಲ್ 30, 2008

ನಿನ್ನಿಂದಲೇ ನಿನ್ನಿಂದಲೇ -

ಹೇಹೇಹೆ ಆಹಾಹಾ ತನನಾನ ನನನಾನ ನನನಾನನಾ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಹೇಹೇಹೇ ಆಹಾಹಾ ತನನಾನ ನನನಾನ ನನನಾನನಾ

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಮಂಗಳವಾರ, ಏಪ್ರಿಲ್ 15, 2008

ಇವನು ಗೆಳೆಯನಲ್ಲ -

ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲು ನಗುತಿಹನಲ್ಲ
ಯಾಕೆ ಈ ಥರ
ಜಾಣ ಮನವೆ ಕೇಳು
ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ
ಇರಲಿ ಅಂತರ
ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ

ಒಲವ ಹಾದಿಯಲ್ಲಿ
ಇವನು ನನಗೆ ಹೂವೋ ಮುಳ್ಳೋ
ಮನದ ಕಡಲಿನಲ್ಲಿ
ಇವನು ಅಲೆಯೋ ಭೀಕರ ಸುಳಿಯೋ
ಅರಿಯದಂಥ ಹೊಸ ಕಂಪನವೋ
ಏನೋ ಕಾಣೆನು
ಅರಿತೊ ಮರೆತೊ ಜೀವ
ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯಿ ಮನವೇ
ಉಳಿಸು ನನ್ನನು
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು
ತನ್ನ ತಾನೆ ಸುಡುತಿಹನಿಲ್ಲ
ಒಲುಮೆಯೆಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ
ಏನು ಕಳವಳ
ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ
ಜಾರಿಬಿದುವುದೇ ಈ ಹೃದಯ
ಏನೋ ತಳಮಳ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ

ಕುಣಿದು ಕುಣಿದು ಬಾರೆ -

ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವಾ ನಿನ್ನ ಮೇಲೆ
ಮಳೆಯಾ ಹನಿಯ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ
ಒಲವೇ ವಿಸ್ಮಯ
ನಿನ್ನ ಪ್ರೇಮ, ರೂಪ ಕಂಡು
ನಾನು ತನ್ಮಯ

ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೋ
ಒಲವೆ ವಿಸ್ಮಯ

ಇರುಳಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ

ನಿನ್ನ ಕಣ್ಣ ತುಂಬ
ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೇ
ಪರಿಮಳದಲ್ಲಿ ಅರಳುವ ಬಾರೋ
ಒಲವೆ ವಿಸ್ಮಯ

ಒಲವೆ ನೀನೊಲಿದಾ ಕ್ಷಣದಿಂದಲೇ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ ಹೂವಾಗಿರೆ
ಬೇರೇನೂ ಬೇಕಿಲ್ಲ ನೀನಲ್ಲದೆ

ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ
ಒಲವೇ ವಿಸ್ಮಯ
ನಿನ್ನ ಪ್ರೇಮ, ರೂಪ ಕಂಡು
ನಾನು ತನ್ಮಯ

ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೋ
ಒಲವೆ ವಿಸ್ಮಯ

ಶನಿವಾರ, ಏಪ್ರಿಲ್ 12, 2008

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ -

ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ!
ನಿನ್ನ ಮುಗಿಲ ಸಾಲೇ... ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿ ಮಳೆಗೆ... ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ... ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿ ಒಡೆಯುವುದೋ... ತಿಳಿಯದಾಗಿದೆ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಭುವಿ ಕೆನ್ನೆ ತುಂಬಾ... ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ... ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು... ಪ್ರೇಮನಾದವೋ
ಎಳೆ ಮುಗಿಲಿನಲ್ಲಿ... ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು... ಏನು ಮೋಡಿಯೋ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಯಾವ ಹನಿಗಳಿಂದಾ... ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದಾ... ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ... ಯಾರು ಬರೆದರೋ
ಯಾವ ಪ್ರೀತಿ ಹೂವು... ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ... ಯಾರು ಬಲ್ಲರೋ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಒಲವ ಚೆಂದಮಾಮ... ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ... ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ... ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವಾ ಇಂದು...
ಧನ್ಯನಾದೆ ಪಡೆದುಕೊಂಡು... ಹೊಸ ಜನ್ಮವೋ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...

ಅರಳುತಿರು ಜೀವದ ಗೆಳೆಯ -

ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ ಪ್ರೇಮದಾ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ... ಹೀಗೇ ಸುಮ್ಮನೆ
ಅರಳುತಿರು ಜೀವದ ಗೆಳೆಯ...

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು... ಯಾಕೇ ಸುಮ್ಮನೆ
ಅರಳುತಿರು ಜೀವದ ಗೆಳೆಯ...

ಮಾತಿಗೆ ಮೀರಿದ ಭಾವದ ಸೆಳೆತವೆ ಸುಂದರ
ನಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆ ಆದರು ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ... ಹೀಗೇ ಸುಮ್ಮನೆ...

ಅರಳುತಿರು ಜೀವದ ಗೆಳೆಯ...
ಸ್ನೇಹದ ಸಿಂಚನದಲ್ಲಿ...
ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ... ಹೀಗೇ ಸುಮ್ಮನೆ
ಅರಳುತಿರು ಜೀವದ ಗೆಳೆಯ...

ಶುಕ್ರವಾರ, ಏಪ್ರಿಲ್ 11, 2008

ಅನಿಸುತಿದೆ ಯಾಕೋ ಇಂದು -

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ! ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ... ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇಂದು...

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ನು ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೇ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ... ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇಂದು...

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸೊಲ್ಲಿದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೇ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ... ಹಾಗೇ ಸುಮ್ಮನೆ

ಅನಿಸುತಿದೆ ಯಾಕೋ ಇಂದು...
ನೀನೇನೆ ನನ್ನವಳೆಂದು...
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ! ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ... ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇಂದು...